ಜ್ಯಾಕೊಬೈಟರು
ಇಂಗ್ಲೆಂಡಿನ ಸ್ಟೂಯರ್ಟ್ ರಾಜಮನೆತನಕ್ಕೆ ವಿಧೇಯರಾಗಿದ್ದು, ಆ ವಂಶದವರು ಸಿಂಹಾಸನವನ್ನು ಕಳೆದುಕೊಂಡಾಗ ಅವರನ್ನು ಮತ್ತೆ ತರಲು ಪ್ರಯತ್ನಿಸಿದವರು. 1688ರ ಕ್ರಾಂತಿಯಲ್ಲಿ ಸ್ಟೂಯರ್ಟ್ ವಂಶದ ಎರಡನೆಯ ಜೇಮ್ಸ್ ಸಿಂಹಾಸನ ಬಿಟ್ಟು ಓಡಿಹೋದಾಗ ಅದು ಜರ್ಮನಿಯ ಹ್ಯಾನೊವರ್ ಮನೆತನಕ್ಕೆ ಹೋಯಿತು. ಎರಡನೆಯ ಜೇಮ್ಸ್ ಬದುಕಿರುವವರೆಗೂ ಅವನಿಗೇ ಸಿಂಹಾಸನ ಸಿಗಬೇಕೆಂದು ಜ್ಯಾಕೊಬೈಟರು ಪ್ರಯತ್ನಿಸಿದರು. ಅವನ ಮರಣಾನಂತರ ಆತನ ವಂಶಜರಿಗೆ ಸಿಂಹಾಸನ ದೊರಕಿಸಲು 1715 ಮತ್ತು 1745ರಲ್ಲಿ ವಿಫಲ ಪ್ರಯತ್ನ ಮಾಡಿದರು. 1807ರಲ್ಲಿ ಸ್ಟೂಯರ್ಟ್ ವಂಶದ ಕೊನೆಯ ವ್ಯಕ್ತಿ ತೀರಿಕೊಂಡಾಗ ರಾಜಕೀಯವಾಗಿ ಜ್ಯಾಕೊಬೈಟರ ಚಳವಳಿ ನಿಂತುಹೋಯಿತು.						(ಬಿ.ಎಸ್.ಎ.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ